ಹೇಗೆ ತೀರಿಸಲಿ.. ನಿನ್ನ ಪ್ರೀತಿಯ ಋಣ..
ಈ ಒಂದೇ ಜನ್ಮದಲಿ…
ಇನ್ನೊಂದು ಜನ್ಮ ಹುಟ್ಟಿ ನಾ ಬರುವೆ
ನಿನಗೇ ಮಗುವಾಗಿ.. ಅಮ್ಮನ ಮುದ್ದು ಮಗನಾಗಿ
ನಿನಗಿಂತ ಹೆಚ್ಚೇನೂ ನನಗೆ.. ಜಗದೆಲ್ಲ ಸುಖವೆಲ್ಲ ಕಡೆಗೆ…
ನಿನ್ನೊಂದು ಕೈತುತ್ತು ಸಾಕು.. ಸಿಕ್ಕಂತೆ ಅಮೃತದ ಗುಟುಕು..
ಎಲ್ಲ ಪ್ರೀತಿಗಳ ಗಳಿಸಿದೆ ನಾ.. ಯೋಗ್ಯತೆಯ ಆಧಾರದಿಂದ..
ಆಧಾರ ಮರೆಯಾದ ಮೇಲೆ.. ಆದರವು ಇನ್ನೆಲ್ಲಿ ಹೇಳು..
ಜನ್ಮದಿಂದಲೆ ಮಮತೆ … ಅಮ್ಮ ನೀಡುವಳು
ಅವಳ ಪ್ರೀತಿಯೊಂದೇ ನಿಷ್ಚಲವು…
ಕಣ್ಮುಂದೆ ನಡೆವ ದೇವತೆಯೇ ನೀನು
ಕಾಣದೇ ಹೋದ ಕಡು ಮೂರ್ಖ ನಾನು..
ಮಮತೆಯ ಮಾತಿಂದ ಇನ್ನೊಮ್ಮೆ ಕೂಗೇ
ಓಡೋಡಿ ಬಂದು ಮಡಿಲಲಿ ಮಲಗುವೆನು..
– ಗೀತ ಲಹರಿ
ಕವಿತೆ ಅರ್ಥ ಪೂರ್ಣವಾಗಿದೆ. ಧನ್ಯವಾದಗಳು !!