ನಿನ್ನ ರೂಪವ ಪೂಜಿಸುವ,
ಬಡಪಾಯಿ ಹೃದಯಿ ನಾನು
ನನ್ನ ಒಪ್ಪಿ ಬಿಡು ನೀನು, ತಪ್ಪೇನಿದೇ…
ನೀ ಜೊತೆ ಇದ್ದರೆ ಸಾಕು,
ನೋವಲ್ಲು ನಗುವೆ ನಾನು
ನನ್ನ ಪಕ್ಕ ಬಂದು ನಿಲ್ಲು, ಸದ್ದಿಲ್ಲದೇ…
ಅತಿ ಸುಳ್ಳು ಬುರುಕ ನಾನು
ನಿಜ ಒಂದ ಹೇಳಲೇನು
ಇರಲಾರೆ ಎಂದೂ ನಾನು.. ನೀನಿಲ್ಲದೇ…
ಭೂಮಿಯಂತ ಹುಡುಗಿಗೆ
ಸೂರ್ಯನಾಗಿ ನಾನು
ಕಾಮನಬಿಲ್ಲಿನ ಉಂಗುರ ಹಾಕುವೆ.. ಇನ್ನೇನಿದೆ
- ಗೀತ ಲಹರಿ
ನನ್ನ ನಿಶ್ಚಿತಾರ್ಥದ ದಿನ ಈ ಕವಿತೆಯನ್ನು ತುಂಬು ಸಭೆಯಲ್ಲಿ ಹೇಳಿ ಸಿನಿಮೀಯ ರೀತಿಯಲ್ಲಿ ನನ್ನವಳಿಗೆ ಉಂಗುರ ಹಾಕಿದ ಕ್ಷಣ – ಜಗವೇ ಮಾಯಾಲೋಕವಾಗಿತ್ತು.
ತುಂಬಾ ಚೆನ್ನಾಗಿದೆ.