ಹರಿಹರಗೌಡ ಪಾಟೀಲ್
ವೃತ್ತಿಯಲ್ಲಿ ನಾನು ಅಂತರ-ಸ್ಥಾಪಿತ ಯಂತ್ರದ ಅಭಿಯಂತರನಾಗಿ (embedded System Engineer) ಸೇವೆ ಸಲ್ಲಿಸುತ್ತ ವರ್ಷಗಳೇ ಕಳೆದು ಹೋದವು. ಹೊಸ ಅನ್ವೇಷಣೆಗಳು ವೃತ್ತಿಯ ಭಾಗವಾಗಿ ರುವುದರಿಂದ ಕೆಲಸದಲ್ಲಿ ತೃಪ್ತಿಯಿದೆ. ಆದರೂ ಮನಸ್ಸಿನ ಮೂಲೆಯಲ್ಲಿ ಕಥೆ/ಕವನ ಓದುವ , ಬರೆಯುವ ಆಸಕ್ತಿ ಎಂದಿಗೂ ಕಡಿಮೆಯಾಗಿಲ್ಲ. ಅದೇ ಆಸಕ್ತಿಯೇ ನನ್ನನ್ನು ಇಲ್ಲಿಗೆ ಕರೆತಂದಿದೆ. ಇದಕ್ಕಿಂತ ಮೊದಲು ನನ್ನ ಪುಸ್ತಕದ ಕೊನೆಯ ಹಾಳೆಯಲ್ಲಿ ಮೂಡುತ್ತಿದ್ದ ಸಾಹಿತ್ಯಕ್ಕೆ ವೇದಿಕೆ ಈ ಬ್ಲಾಗ್.