ಅಮ್ಮ.. ಚಂದ್ರನ ತೋರಿ
ಕೈ ತುತ್ತು ಕೂಡುಬಾರೆ
ಮುನಿಸು ಬಂದಿದೆ ನನಗೆ.. ತಿನ್ನಲೊಲ್ಲೆ
ನೀ ಇಲ್ಲದೆ ಚಂದಿರನು ಸೊರಗಿಹನು
ಅಮ್ಮ.. ವಸ್ತ್ರವ ನೀಡಿ
ಬಾಯ್ತುಂಬಾ ಬೈ ಬಾರೆ
ಮಳೆಯಲಿ ನಾ ನೆಂದು ಬಂದಿರುವೆ
ನೀನಿರದೆ ಮಳೆಯ ಪರಿವಿಲ್ಲ
ಅಮ್ಮ.. ಬೆನ್ನ ತಟ್ಟಿ
ಧೈರ್ಯ ಹೇಳು ಬಾರೆ
ಎಲ್ಲರೂ ಇದ್ದರೂ.. ಒಬ್ಬಂಟಿ ಎನಿಸಿಹುದು
ನೀನಿರದೆ ಜಗದ ಪರಿವಿಲ್ಲ