ಹಾ…ರಾಡುವ.. ಮುಂಗುರುಳ ಜೊತೆ
ಕಾ…ದಾಡುವ.. ಕಿರುಬೆರಳು…
ಹೊಂ..ಬಿಸಿಲನು. ಹಿಡಿದಿಡುವ
ಬಿಡದೆ ಕಾಡುವ ಕಣ್ಣುಗಳು..
ಮೈಮರೆತು ನೋಡುತ ನಿಂತರೆ..
ಅನಿಸುವುದು ಇವಳೇ ಅಪ್ಸರೆ..
ಮನದ ಗೋಡೆಯ ಚಿತ್ತಾರ ನೀನು
ಒತ್ತಾಸೆಯಾಗಿ ಒಲಿಯುವೆಯ?
ಸುಂದರ ಮೇಣದ ವಿನ್ಯಾಸ ನೀನು
ನನ್ನ ಪ್ರೀತಿಯ ಶಾಖಕೆ ಕರಗುವೆಯ?
ಎಳೆ ಹುಡುಗ ನಾನು….
ಏನು ತಿಳಿಯ ದಿನ್ನೂ…
ನನ್ನ ತುಂಟ ಮಾತಿಗೆಲ್ಲ
ಸೆರಗಿನ ಅಂಚಿನಿಂದಲೇ ಶಿಕ್ಷಿಸು
ಬಣ್ಣದ ಸಾಲುಗಳ ಅರೇಕವಿ ನಾನು
ನಿನ್ನ ಸಾನ್ನಿಧ್ಯ ವಹಿಸುವೆಯ?
ಅತಿ ಪ್ರಾಮಾಣಿಕ ಆರಾಧಕ ನಾನು
ಸಣ್ಣ ಮುತ್ತಿಟ್ಟು ಓಡುವೆಯ ?
ಮರಳು ಪ್ರೇಮಿ ನಾನು
ಮನದಾಸೆ ಹೇಳಲೇನು
ನನ್ನ ಅತಿಶಯೋಕ್ತಿ ಗೆಲ್ಲ
ಬಿಗಿಯಪ್ಪುಗೆಯಿಂದಲೇ ಶಿಕ್ಷಿಸು
- ಗೀತಲಹರಿ