ಜೀವನ ಸಂಗಾತಿಯೇ ಅಥವಾ ದೇವತೆಯೇ?
ಹೊಂಬಿಸಿಲ ಬಣ್ಣದವಳು
ಬೆಳದಿಂಗಳ ಕಣ್ಣಿನವಳು
ಹಾಲಿನಂತ ಮನಸಿನವಳು
ಹೂವಿನ ಗುಣದವಳು
ನನ್ನ ಕನಸುಗಳಿಗೆ ಸ್ಫೂರ್ತಿ ತುಂಬಿದವಳು
ನನ್ನ ಕನಸಿನ ತೇರಿಗೆ ಭುಜಕೊಟ್ಟು ನಡೆದವಳು
ನನ್ನನ್ನು ನಾನಾಗಿಯೇ ಒಪ್ಪಿಕೊಂಡವಳು
ಯಾರೂ ನನ್ನ ನಂಬದಾಗ, ನನ್ನಲ್ಲಿ ನಂಬಿಕೆ ಇಟ್ಟವಳು
ಸಣ್ಣ ಖುಷಿಯಲ್ಲೇ ತೃಪ್ತಿಗೊಂಡವಳು
ಇದ್ದಾಗಲೂ ಇರದಾಗಲು ಜೊತೆಗೆ ನಿಂತವಳು
ಇಂತವಳು ಸಿಗುವುದು ಅದೃಷ್ಟವೇ ಸರಿ
ನೀನು ನನಗೆ ದೇವತೆಯೇ ಸರಿ..
- ಗೀತ ಲಹರಿ