ಮೃತ್ಯುವ ಜಯಿಸಿದ ಮೃಂತ್ಯುಂಜಯ
ಭೂಕುಲವ ಕಾಪಡೋ ಕರುಣಾಮಯ
ನಿರಾಕಾರ ನಿರ್ಗುಣ ನಿಜ ಬಾಂಧವ
ಓಂಕಾರ ದಲಿ ನೆನೆವೆ ಪರಮಶಿವ.. ಪರಮಶಿವ
ಸಮಯದ ಗತಿ ನೀನೆ
ಸೃಷ್ಠಿಯ ಲಯ ನೀನೆ
ಪ್ರತಿ ಜೀವಕಣದಲ್ಲೂ ಚೈತನ್ಯ ನೀನೆ
ಶಿವನಾಮ ಜಪದಿಂದ ಭಯವನ್ನೆ ಕಾಣೆ | ಪ|
ನಿರಾಕಾರ ನಿರ್ಗುಣ ನಿಜ ಬಾಂಧವ
ಓಂಕಾರ ದಲಿ ನೆನೆವೆ ಪರಮಶಿವ.. ಪರಮಶಿವ
ಆದಿ ಅಂತ್ಯಗಳು ನಿನಗೆಲ್ಲಿ ಯೋಗಿ
ಗುಣಾತೀತ ಶಕ್ತಿಯೆ ಆದಿಯೋಗಿ
ನಿತ್ಯ ಭಜಿಸುವೆ ಪರವಶನಾಗಿ
ಕರುಣಿಸು ಮುಕ್ತಿಯ ಭವ ಭಾರ ನೀಗಿ…|ಪ|
ನಿರಾಕಾರ ನಿರ್ಗುಣ ನಿಜ ಬಾಂಧವ
ಓಂಕಾರ ದಲಿ ನೆನೆವೆ ಪರಮಶಿವ.. ಪರಮಶಿವ
- ಗೀತ ಲಹರಿ
Posted inDaily prompt ಹನಿಗವನ