ನೀನೊಬ್ಬ ಪ್ರಾಣಿಯೋ ಮನುಷ…
ಅಲ್ಲವೋ ನೀನು ವಿಶೇಷ…
ಕಾರಿದರೆ ಭೂಮಿಗೇ ವಿಷ
ಆಗುವೆ ನಾಮಾವಾಶೇಷ…
ಬಗೆದರೆ ಪ್ರಕೃತಿಗೆ ಕೇಡು
ಕರೋನಾವೇ ಉತ್ತರ ನೋಡು [ಪಲ್ಲವಿ]
ಆಗೆದಗೆದು ಮಣ್ಣನು
ಕಟ್ಟುತಿರುವೆ ಮಹಲನು
ಸಸ್ಯರಾಶಿ ಜೀವಕೊಟಿ
ಸಂಕುಲವ ನಾಶ ಮಾಡಿ
ಲೋಹದದಿರ ಹೆಕ್ಕುತಿರುವೆ
ಭೂಮಿ ಕಡಲ ಕೆಣಕಿ
ಅಣು ಅಣುವನು ಬೇರ್ಪಡಿಸಿ
ಸಮತೋಲನ ಹದಗೆಡಿಸಿ
ಜೀವದ ಮೂಲವನೆ ಕೆಣಕಿರುವೆ
ಜೀವಕೋಶದೀ ನುಸುಳಿ
ಹೊತ್ತಿ ಉರಿಯದೇ ಕಾಡು
ಕರಗದೇ ಧ್ರುವದ ಮಂಜು
ಬತ್ತದೇ ನದಿಯ ಒಡಲು
ಕಲ್ಮಶ ವ ತುಂಬಿಕೊಂಡು
ಪ್ರಳಯ ವಾದಿತು ನೋಡು
ಅಣು-ಅಣುವು ವಿಭಜನೆಗೊಂಡು
ಬಗೆದರೆ ಪ್ರಕೃತಿಗೆ ಕೇಡು
ಕರೋನಾವೇ ಉತ್ತರ ನೋಡು
ನೀನೆಷ್ಟು ಬಲ್ಲವನೋ ಮನುಷ
ಅದಕ್ಕಿಂತ ನಿಗೂಢ ಪ್ರಪಂಚ
ಬಾಳಿದರೆ ಅನುಸರಿಸಿ
ಉಳಿದೀತು ಮನುಕುಲ
ಇಲ್ಲದಿರೆ ಆಗುವೆ ನಾಮಾವಶೇಷ…[ಪಲ್ಲವಿ]
– ಗೀತ ಲಹರಿ
Posted inDaily prompt ಹನಿಗವನ