ಮಳೆಯ ನೆನಪು
MaleYA Nenapu!!
ಕಪ್ಪು ಮೋಡಗಳು ಜೊತೆಯಾಗಿ ಬಂದು
ಭೂಮಿಯ ಮಾಡಿದೆ ತಂಪು..
ಹನಿಯೊಂದೊಂದು ಬೀಳುತಿದೆ ಧರೆಗೆ
ತರುತಲಿ ನಿನ್ನ ಒಂದೊಂದೇ ನೆನಪು..
ನಿನ್ನೆಲ್ಲ ಭಾವಗಳು ಜೊತೆಗೂಡಿ ಸುರಿಯಲು
ಎಲ್ಲ ಹನಿಗಳ ಬೊಗಸೆ ತುಂಬಿ ಹಿಡಿಯುತ್ತಾ
ಆಗಿದೆ ನನ್ನ ಮನಸು ತಂಪು..
ಬಯಸಿದೆ ನಿನ್ನದೇ ಸನಿಹವ
ತರುತಲೀ ಜೀವನದ ಹೊಸ ಹೊಳಪು…
- ಗೀತ ಲಹರಿ
